Our School Established on August 15th 1947, on the Day of Independence
Welcome to all....

Resources




10 ನೇ ತರಗತಿ ITಯ 3ನೇ ಅಧ್ಯಾಯದ ವರ್ಕ್ ಶೀಟ್ ನ ಕನ್ನಡ ಅನುವಾದ

ಪ್ರಫುಲ್ಲಚಂದ್ರ.ಸಿ.ಎಚ್,
ಅಧ್ಯಾಪಕರು
ವರ್ಕ್ ಶೀಟ್ 1
ದಿನಾ೦ಕ:

ಚಟುವಟಕೆಯ ಹೆಸರು Www.wikimapia.org ಎ೦ಬ ಸೈಟನಲ್ಲಿ ಪ್ರವೇಶಸಿ ಒ೦ದು ನಿರ್ದಿಷ್ಟ ಸ್ಥಳವನ್ನು ಗುರುತಿಸಲು


ಚಟುವಟಕೆಯ ಉದ್ದೇಶಗಳು ಡಿಜಿಟಲ್ ಭೂಪಟವನ್ನು ಉಪಯೋಗಿಸಿ ಸ್ಥಳ ನಿರ್ಣಯಿಸಲಿರುವ ಸಾಮರ್ಥ್ಯ ಗಳಿಸಲು
ಉಪಯೋಗಿಸಬೇಕಾದ ಸೋಫ್ಟ್ ವೇರ್ wikimapia digital map
ಬೇಕಾದ ಸಮಯ

ಚಟುವಟಿಕಾ ರೀತಿ
1. www.wikimapia.org ಎ೦ಬ ವೆಬ್ ಸೈಟನ್ನು ಪ್ರವೇಶಿಸಲು
Application –internet –firefox web browser ತೆರೆದು ಅದರಲ್ಲಿ www.wikimapia.org ಎ೦ದು ಟೈಪು ಮಾಡಿ ಸೈಟನ್ನು ಪ್ರವೇಶಿಸುವುದು
2.ಸರ್ಚ್ ಮಾಡಿ ಸ್ಥಾನವನ್ನು ನಿರ್ಣಯಿಸಲು
ಬಲಭಾಗದ ಮೇಲಿರುವ search ಎ೦ಬಲ್ಲಿ ಹೆಸರು ಕೊಟ್ಟು ಎ೦ಟರ್ ಕೀ ಒತ್ತುವುದು
3.ಸ್ಥಳವನ್ನು ಗುರುತಿಸಲು
Edit map ---add place ---+ ಉಪಯೋಗಿಸಿ ಸ್ಥಳವನ್ನು ಗುರುತಿಸುವುದು.save ಮಾಡುವುದು.ಆಗ ಹೆಸರು ಮತ್ತು ವಿವರಗಳನ್ನು ನೀಡಬೇಕಾಗುವುದು.ಅದನ್ನು ನೀಡುವುದು.
4.www.keralaresourcemaps.inಎ೦ಬ ವೆಬ್ ಸೈಟಿನಲ್ಲಿ ಪ್ರವೇಶಿಸಿ ವೆಬ್ ಜಿಸ್ ಭೂಪಟವನ್ನು ನೋಡಿ ತಿಳಿಯಲು
ಸೈಟಿನಲ್ಲಿ ಪ್ರವೇಶಿಸುವರು. palakad---malampuzha ---akathathara ಎ೦ದು ಕೊಟ್ಟು ಭೂಪಟವನ್ನು ನೋಡುವರು.ಎಡಭಾಗದಲ್ಲಿ ಬದಲಾವಣೆ ಯನ್ನು ತ೦ದು ನಿರೀಕ್ಷಿಸುವರು.


ವರ್ಕ್ ಶೀಟ್ 2
ದಿನಾ೦ಕ:

ಚಟುವಟಕೆಯ ಹೆಸರು QGIS ಉಪಯೋಗಿಸಿ ಬಫರಿ೦ಗ್
ಚಟುವಟಕೆಯ ಉದ್ದೇಶಗಳು ಒ೦ದು ರಸ್ತೆಯ ಅಗಲವನ್ನು ಹೆಚ್ಚಿಸುವಾಗ ಮನೆ ನಷ್ಟವಾಗುವ ಕುಟು೦ಬಗಳ ಸ೦ಖ್ಯೆಯನ್ನು ಹಾಗು ಪಟ್ಟಿಯನ್ನು ತಯಾರಿಸಲು
ಉಪಯೋಗಿಸಬೇಕಾದ ಸೋಫ್ಟ್ ವೇರ್ QGIS ಸೋಫ್ಟ್ ವೇರ್
ಬೇಕಾದ ಸಮಯ 30 ನಿಮಿಷ
ಚಟುವಟಿಕಾ ರೀತಿ
1. ಕ್ವಾ೦ಟ೦ ಜಿಸ್ ಎ೦ಬ ಸೋಫ್ಟ್ ವೇರನ್ನು ತೆರೆಯಲು
application—science--Quantun GIS -file-open project - qGis project -open

2.ಲೇಯರುಗಳನ್ನು ಗುರುತಿಸಲು
ಎಡಭಾಗದಲ್ಲಿ ಕಾಣುವ ಲೇಯರುಗಳ ಚೆಕ್ ಬೋಕ್ಸುಗಳಲ್ಲಿ ಚೆಕ್ ಮಾರ್ಕ್ ಗಳನ್ನು ಅಳಿಸಿ ಮತ್ತು ಚೆಕ್ ಮಾರ್ಕ್ ಗಳನ್ನು ಕೊಟ್ಟು ಭೂಪಟದಲ್ಲಾಗುವ ಬದಲಾವಣೆಗಳನ್ನು ನಿರೀಕ್ಷಿಸುವುದು
3.ಭೂಪಟದಲ್ಲಿ ಅಗತ್ಯವಾದ ಸಲೆಕ್ಷನುಗಳನ್ನು ಮಾಡಲು
Road ಎ೦ಬ ಲೇಯರನ್ನು ಸೆಲೆಕ್ಟ್ ಮಾಡುವುದು. select single feature button ಉಪಯೋಗಿಸಿ ಪ್ರಧಾನ ರಸ್ತೆಯನ್ನು ಸೆಲೆಕ್ಟ್ ಮಾಡುವುದು.
4.ಜಿಯೋಪ್ರೋಸೆಸಿ೦ಗ್ ನಡೆಸುವುದು
vector—Geo processing Tools---Buffers
ಎ೦ಬ ಕ್ರಮದಲ್ಲಿ ಕ್ಲಿಕ್ ಮಾಡುವುದು. Input vector Layer ಆಗಿ Roads ಆಯ್ಕೆ ಮಾಡಬೇಕು. Buffer distance ಎ೦ಬ ಭಾಗದಲ್ಲಿ ಪ್ರಧಾನ ರಸ್ತೆಗಿರುವ ಅಧಿಕ ಅಗಲವಾಗಿ 10 ನ್ನು ನೀಡುವುದು. Output shapefile ಎ೦ಬಲ್ಲಿ ಬ್ರೌಸ್ ಬಟನ್ ಕ್ಲಿಕ್ ಮಾಡಿ ಲೇಯರಿಗೆ ಹೆಸರು ನೀಡುವುದು.ಸೇವ್ ಮಾಡುವುದು.ಹೊಸ ಲೇಯರಿಗಿರುವ ಅನುಮತಿಯನ್ನು ನೀಡುವುದು.
5.ಲೇಯರುಗಳನ್ನು ಕ್ರಮೀಕರಿಸಲು
ಲೆಯರ್ ಬೋಕ್ಸಿನಲ್ಲಿ ರೋಡ್ ಲೆಯರನ್ನು ಡ್ರೇಗ್ ಮಾಡ್ ಬಫರ್ ರೋಡ್ ಲೆಯರಿನ ಮೇಲ್ಭಾಗಕ್ಕೂhouse ಲೇಯರನ್ನು ರೋಡ್ ಲೆಯರಿನ ಮೇಲ್ಭಾಗಕ್ಕೂ ಕ್ರಮೀಕರಿಸ ಬೇಕು.
6.ನಷ್ಟವಾದ ಮನೆಗಳನ್ನು ಕ೦ಡುಹಿಡಿಯಲು
Zoom in ಮಾಡಬೇಕು.house ಲೇಯರಿನಲ್ಲಿ ಕ್ಲಿಕ್ ಮಾಡಿ identify Featuresಎ೦ಬ ಟೂಲಿನಲ್ಲಿ ಕ್ಲಿಕ್ ಮಾಡಿ ಬಫರ್ ಲೇಯರಿನಲ್ಲಿ ಪ್ರತಿ ಮನೆಯನ್ನು ಸೂಚಿಸುವ ಬಿ೦ದುವಿನಲ್ಲಿ ಕ್ಲಿಕ್ ಮಾಡಬೇಕು.
7.ನಷ್ಟಗೊ೦ಡ ಮನೆಗಳ ಪಟ್ಟಿ ತಯಾರಿಸಲು
Vectors ---geo processing tool-intersect---(houses,buffer roads) Browse— ಹೆಸರು ನೀಡುವುದು.--save –yes . Interset layer (right click) open attribute table


ವರ್ಕ್ ಶೀಟ್ 3
ದಿನಾ೦ಕ:

ಚಟುವಟಕೆಯ ಹೆಸರು QGIS ನ  ಹೊಸ ಲೇಯರುಗಳು
ಚಟುವಟಕೆಯ ಉದ್ದೇಶಗಳು ಮನೆಗೆ ಸ೦ಬ೦ಧಿಸಿದ ಬಾವಿಗಳನ್ನು ಗುರುತಿಸಲು
ಉಪಯೋಗಿಸಬೇಕಾದ ಸೋಫ್ಟ್ ವೇರ್ QGIS ಸೋಫ್ಟ್ ವೇರ್
ಬೇಕಾದ ಸಮಯ 15 ನಿಮಿಷ
ಚಟುವಟಿಕಾ ರೀತಿ
1. ಕ್ವಾ೦ಟ೦ ಜಿಸ್ ಎ೦ಬ ಸೋಫ್ಟ್ ವೇರನ್ನು ತೆರೆಯಲು
application—science--Quantun GIS -file-open project - qGis project -open

2.QGIS ನಲ್ಲಿ ಹೊಸ ಲೇಯರುಗಳನ್ನು ಸೇರಿಸಲು
Layer—new—new shape file layer—
ಎ೦ಬ ಕ್ರಮದಲ್ಲಿ ಕ್ಲಿಕ್ ಮಾಡುವುದು. ಮೇಲೆ ಬರುವ ವಿ೦ಡೋವನ್ನು ಕ್ಲೋಸ್ ಮಾಡಿದರೆ ಸಾಕು.ಆಗ ಕೆಳಗೆ
new vector layer ನ್ನು ಕಾಣಬಹುದು. ಅದರಲ್ಲಿ ( point , well , text , 10 ) ಬಾವಿಗೆ ಸೂಕ್ತವಾದುದನ್ನು ಗುರುತಿಸಬೇಕು. Add to attribute ಕೊಟ್ಟು save ಮಾಡುವುದು.ಹೆಸರು wellಎ೦ದು ನೀಡಬಹುದು.ಆಗ ಲೆಯರ್ ಬೋಕ್ಸಿನಲ್ಲಿ well ಲೆಯರನ್ನು ಕಾಣಬಹುದು.
ಬಾವಿಗಳನ್ನು ಗುರುತಿಸಲು
ಲೆಯರ್ ಬೋಕ್ಸಿನಿಂದ well ಎ೦ಬ ಲೆಯರನ್ನು ಸೆಲೆಕ್ಟ್ ಮಾಡಬೇಕು.ಟೂಲುಬಾರಿನಲ್ಲಿ capture point ಎ೦ಬ ಬಟನ್ ಕ್ಲಿಕ್ ಮಾಡಬೇಕು.ಬಾವಿಯನ್ನು ಗುರುತಿಸಬೇಕಾದ ಸ್ಥಾನದಲ್ಲಿ ಕ್ಲಿಕ್ ಮಾಡುವುದು.ತೆರೆದು ಬರುವ ವಿಂಡೋದಲ್ಲಿ ಮಾಹಿತಿಗಳನ್ನು ನೀಡಿ okಒತ್ತಬೇಕು.


ವರ್ಕ್ ಶೀಟ್ 4
ದಿನಾ೦ಕ:

ಚಟುವಟಕೆಯ ಹೆಸರು ಹೊಸ ಒಂದು ಭೂಪಟದ ರಚನೆ
ಚಟುವಟಕೆಯ ಉದ್ದೇಶಗಳು ಮನೆಗೆ ಸ೦ಬ೦ಧಿಸಿದ ಬಾವಿಗಳನ್ನು ಗುರುತಿಸಲು
ಉಪಯೋಗಿಸಬೇಕಾದ ಸೋಫ್ಟ್ ವೇರ್ QGIS ಸೋಫ್ಟ್ ವೇರನ್ನುಉಪಯೋಗಿಸಿ ಹೊಸ ಒಂದು ಭೂಪಟದ ರಚಿಸಿ ಅದರಲ್ಲಿ ಶಿರೋನಾಮೆ ,ದಿಕ್ಕು, ಸೂಚಕಗಳು ಮೊದಲಾದುವುಗಳನ್ನು ಗುರುತಿಸುವುದು
ಬೇಕಾದ ಸಮಯ 15 ನಿಮಿಷ
ಚಟುವಟಿಕಾ ರೀತಿ
1. ಕ್ವಾ೦ಟ೦ ಜಿಸ್ ಎ೦ಬ ಸೋಫ್ಟ್ ವೇರನ್ನು ತೆರೆಯಲು
application—science--Quantun GIS -file-open project - qGis project -open

2.ಕಂಪೋಸರ್ ವಿಂಡೋವನ್ನು ತೆರೆಯುವುದು.
File –new print composer ಎ೦ಬ ಕ್ರಮದಲ್ಲಿ ತೆರೆಯುವುದು. add new map ಎ೦ಬ ಟೂಲನ್ನು ಕ್ಲಿಕ್ ಮಾಡಿದ ಬಳಿಕ ಕ್ಯಾನ್ವಾಸಿನಲ್ಲಿ ಕ್ಲಿಕ್ ಮಾಡಿ ಡ್ರೇಗ್ ಮಾಡುವುದು.

ಭೂಪಟದ ಸ್ಥಾನ ಮತ್ತು ಗಾತ್ರವನ್ನು ಕ್ರಮೀಕರಿಸುವುದು.ಅಗತ್ಯವಿರುವ ಇತರ ಬದಲಾವಣೆ ಗಳನ್ನು ಬರಿಸುವುದು.
ಮೇಲಿನ ಟೂಲುಬಾರಿನಲ್ಲಿ ಕಾಣುವ ಪ್ರತಿಯೊಂದು ಟೂಲನ್ನು ಉಪಯೋಗಿಸಿ ಭೂಪಟವನ್ನು ಕ್ರಮೀಕರಿಸು ವುದು.
ಚಿತ್ರಕ್ಕೆ ಲೇಬಲ್ ಸೇರಿಸುವುದು
Add new label ಟೂಲ್ ಕ್ಲಿಕ್ ಮಾಡುವುದು. ಲೇಬಲ್ ಬರೆಯಬೇಕಾದ ಸ್ಥಳದಲ್ಲಿ ಕ್ಲಿಕ್ ಮಾಡುವುದು. ಬಲಭಾಗದಲ್ಲಿ item ಎ೦ಬುವುದರ ಕೆಳಗೆ ಹೆಸರು ಬದಲಿಸಿ ಬರೆಯುವುದು.ಅಲೈನ್ ಮೆಂಟು ಕ್ರಮೀಕರಿಸುವುದು.
ಮ್ಯಾಪಿನಲ್ಲಿ ಲೆಜೆಂಟುಗಳನ್ನು ಸೇರಿಸುವುದು
Add new vector legend ಸೆಲೆಕ್ಟ್ ಮಾಡಿ ಕ್ಯಾನ್ವಾಸಿನಲ್ಲಿ ಕ್ಲಿಕ್ ಮಾಡುವುದು.ಅದರಲ್ಲಿ ಬೇಕಾದ ಬದಲಾವಣೆಗಳನ್ನು ಮಾಡುವುದು.
ಸೇವ್ ಮಾಡುವುದು
File –Export as image , ಫೋರ್ಮೇಟ್ ಸೆಲೆಕ್ಟ್ ಮಾಡಿ,ಹೆಸರು ಕೊಟ್ಟು ಸೇವ್ ಮಾಡುವುದು.



ಕೃಷ್ಣೋಜಿ ರಾವ್,
ಅಧ್ಯಾಪಕರು


ಪ್ರಾಥಮಿಕ ತರಗತಿಗಳಲ್ಲಿ ಭಾಷಾಕಲಿಕೆ-ಒಂದು ಅವಲೋಕನ
ಮಕ್ಕಳಿಗೆ ಭಾಷೆಯನ್ನು ಕಲಿಸುವುದು ಪರೀಕ್ಷೆಗಳಿಗಾಗಿ ಅಲ್ಲ,ಭಾಷೆ ಸಾಮಾಜಿಕ ಸಂವಹನಕ್ಕಾಗಿಎ೦ಬ ಸತ್ಯವನ್ನು ನಿತ್ಯವು ನಮ್ಮ ನೆನಪಿನಲ್ಲಿರಬೇಕು.ಕೇವಲ ನೋಟ್ ಗಳನ್ನು ತಯಾರಿಸುವುದರಿಂದ, ಪ್ರಶ್ನೋತ್ತರಗಳನ್ನು ಬರೆಯುವುದರಿಂದ, ಬರೆಯಿಸುವುದರಿಂದ, ಉರು ಹೊಡೆಯುವುದರಿಂದ ಉದ್ದೇಶಿತ ಲಕ್ಷ್ಯಕ್ಕೆ ತಲುಪಲು ಸಾದ್ಯವಾಗದು. ಹಾಗಾದರೆ ಭಾಷೆ ಕಲಿಯುವುದು ಹೇಗೆಂದು ನೋಡೋಣ.

ಮಗುವು ತನ್ನ ಮನೆಯಿಂದ ತನ್ನ ಪರಿಸರದಿಂದ ಸಂವಹನದ ಮೂಲಕ ಒಂದು ಭಾಷೆಯನ್ನು ಆಡುತ್ತಾನೆ.ಅದು ಅವನ ಮಾತೃಭಾಷೆಯೂ ಆಗಿರಬಹುದು.ಈ ಭಾಷೆ ಸಹಜವಾಗಿ ಬೆಳೆಯಲು ಬುದ್ಧಿ ವಿಕಾಸಗೊಳ್ಳುವುದು.ಮಗುವಿನಲ್ಲಿ ನೈಸರ್ಗಿಕವಾಗಿ ಯಾವ ಭಾಷೆಯು ಸಂವಹನ ಮತ್ತು ಅಭಿವ್ಯಕ್ತಿಗಾಗಿ ಬಳಸಲ್ಪಡುವುದೋ ಆ ಭಾಷೆಯಲ್ಲಿ ಅವರಿಗೆ ಕಲಿಕೆ ಸಹಜವಾಗಿ ಅರ್ಥಪೂರ್ಣವಾಗುವುದು.

ಭಾಷೆಯ ಬೆಳವಣಿಗೆಯಲ್ಲಿ ಕುಟುಂಬ ಸದಸ್ಯರ ಪಾತ್ರ ಅತ್ಯಂತ ಮಹತ್ವವಾದುದು.ಮಗುವಿಗೆ ಯಾವ ಭಾಷೆಯನ್ನು ಕಲಿಸಬೇಕು ಎ೦ಬುದು ಇಲ್ಲಿ ತೀರ್ಮಾನಿಸಲ್ಪಡುವುದು.ಮಗು ಕಲಿಯಬೇಕಾದ ಭಾಷೆಯು ಅವನಿಗೆ ಒಲವುಳ್ಳದ್ದಾಗಿರಬೇಕು.ಪೂರ್ವ ಪ್ರಾಥಮಿಕ ತರಗತಿಗಳು ಭಾಷೆಯು ಸಹಜವಾದ ವಿಕಾಸದ ಹಂತಗಳಾಗಿವೆ.ಅದನ್ನು ಪೂರೈಸಿ ಒಂದನೇ ತರಗತಿಗೆ ಮಗು ಪ್ರವೇಶ ಪಡೆಯುವಾಗ ಸಂವಹನ ಮತ್ತು ಅಭಿವ್ಯಕ್ತಿಗಾಗಿ ಆತನಲ್ಲಿ ಒಂದು ಭಾಷೆ ಇರುತ್ತದೆ.ಅದನ್ನು ವಿಕಾಸಗೊಳಿಸುವ ಪ್ರಕ್ರಿಯೆಯನ್ನು ವೈಜ್ಞಾನಿಕವಾಗಿ ತರಗತಿಯಲ್ಲಿ ಶಿಕ್ಷಕರು ನಿರ್ವಹಿಸಬೇಕಾಗುವುದು, ಪ್ರಾಥಮಿಕ ತರಗತಿಯು ಭಾಷಾ ಕಲಿಕೆಗೆ ಸಹಜವಾದ ವಾತಾವರಣದಿಂದ ಕೂಡಿದೆ.ತರಗತಿಯಲ್ಲಿ ಮಕ್ಕಳು ಕಲಿಕಾ ಮಾದ್ಯಮದಲ್ಲಿ ಸಂವಹನ ನಡೆಸುತ್ತಾರೆ.ಮಗುವಿಗೆ ಅವನದೇ ಆದ ರೀತಿಯಲ್ಲಿ ಅಭಿವ್ಯಕ್ತಿ ಪಡಿಸುವ ಅವಕಾಶವಿದೆ.

ಮನೆಯಲ್ಲಿ ಮಗುವಿನ ಭಾಷೆ ಮರಾಠಿ,ತುಳು,ಕೊಂಕಣಿ,ಹವ್ಯಕ,ಮಲೆಯಾಳ,ಕನ್ನಡ ಯಾವುದೇ ಆಗಿರಬಹುದು ಪೂರ್ವ ಪ್ರಾಥಮಿಕ ತರಗತಿಗಳ ಮೂಲಕ ಆತ ದಾಟಿ ಬರುವಾಗ ಕನ್ನಡ ಅಥವ ಮಲೆಯಾಳವನ್ನು ಮಾಧ್ಯಮವಾಗಿ ಸ್ವೀಕರಿಸಿರುತ್ತಾರೆ.

ಯಾವುದೇ ಮಗು ಅಥವಾ ವಿದ್ಯಾರ್ಥಿ ಒಂದಕ್ಕಿಂತ ಹೆಚ್ಚಿನ ಭಾಷೆಯನ್ನು ಅನಿವಾರ್ಯವಾಗಿ ಕಲಿಯಲೇಬೇಕಾಗಿದೆ.ಯಾವುದೇ ಇತರ ಭಾಷೆಗಳನ್ನು ಅಧ್ಯಯನ ನಡೆಸುವಾಗ ಮಾತೃಭಾಷೆಯ ಪ್ರಭಾವ ಆ ಭಾಷಯ ಮೇಲೆ ಉಂಟಾಗುವುದು.ಪರಿಣಾಮವಾಗಿ ಅಲ್ಲಿ ಯಶಸ್ಸು ನಿರ್ಣಯಿಸಲ್ಪಡುವುದು. ಆದುದರಿಂದ ಮಾಧ್ಯಮ ಭಾಷಯನ್ನು ಆಯ್ಕೆ ಮಾಡುವಾಗ ಬಹಳ ಜಾಗರೂಕತೆವಹಿಸಬೇಕು.

ಒಂದನೇ ತರಗತಿಗೆ ಬರುವ ಮಕ್ಕಳು ಸಮಪ್ರಾಯದವರಾಗಿದ್ದಾರೆ. ಆದರೆ ಅವರು ಭೌದ್ಧಿಕ ಮಟ್ಟದಲ್ಲಿ ಭಿನ್ನರಾಗಿರುತ್ತಾರೆ,ಎ೦ಬುದು ಅತ್ಯಂತ ಪ್ರಾಧಾನ್ಯವಿರುವ ವಿಚಾರವಾಗಿದೆ.ಪ್ರತಿಯೊಬ್ಬ ಮಗುವಿನ ಕುರಿತು ಅಧ್ಯಯನ ನಡೆಸುವುದು ಶಿಕ್ಷಕರ ಇಂದಿನ ಅನಿವಾರ್ಯತೆಯಾಗಿದೆ.ಮಕ್ಕಳು ಸಾರ್ವಜನಿಕ ವಿದ್ಯಾಲಯಗಳಿಂದ ದೂರವಾಗುತ್ತಿದ್ದಾರೆ ಎ೦ಬ ಕೂಗಿನ ಕಾಲಘಟ್ಟದಲ್ಲಿ ಶಿಕ್ಷಕ ಬದಲಾಗಬೇಕಾಗಿದೆ. ಪಠ್ಯಪುಸ್ತಕದಲ್ಲಿರುವ ಮಾಹಿತಿಗಳನ್ನು ವರ್ಗಯಿಸುವ,ಪ್ರಶ್ನೋತ್ತರಗಳನ್ನು ನೋಟ್ ಗಳನ್ನು ನೀಡುವ, ಪಠ್ಯಭಾಗವನ್ನು ಉರು ಹೊಡಿಸುವ ಪರೀಕ್ಷೆಗೆ ಸಿದ್ದಗೊಳಿಸುವ ಕಾರ್ಯದಲ್ಲಿ ನಿರತರವಾಗುವುದು ಶಿಕ್ಷಕರ ಕೆಲಸವಲ್ಲ.ಬದಲಾಗಿ ಮಗುವಿನ ಸರ್ವತೋಮುಖ ಅಭಿವೃದ್ದಿಗೆ ಪೂರಕವಾಗಿ ಭಾಷಾ ಬೆಳವಣಿಗೆ ನಡೆಯುವಂತೆ,ಮಗುವಿನಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ವಿಕಾಸಗೊಳಿಸುವಂತಹ ಕಾರ್ಯದಲ್ಲಿ ಅಧ್ಯಾಪಕರು ತೊಡಗಿಕೊಳ್ಳಬೇಕು.(ಮುಂದುವರಿಯುವುದು)






No comments:

Post a Comment