Our School Established on August 15th 1947, on the Day of Independence
Welcome to all....

Friday, 8 August 2014

"ಸಾಕ್ಷರ 2014 "ಉದ್ಘಾಟನೆ


         ದಿನಾಂಕ 06.08.2014 ರಂದು "ಸಾಕ್ಷರ "ಕಾರ್ಯಕ್ರಮ ಆರಂಭಗೊಂಡಿತು.ಭಾಷಾ ಸಾಮರ್ಥ್ಯವನ್ನು ಗಳಿಸಲು ಸವಾಲನ್ನೆದುರಿಸುವ ಮಕ್ಕಳನ್ನು ಗುರುತಿಸಿ ಪ್ರತಿ ದಿನ ಒಂದು ಗಂಟೆ ಸಮಯ ಭಾಷಾ ಕಲಿಕೆಯಲ್ಲಿ ತೊಡಗುವ ಈ ಕಾರ್ಯಕ್ರಮವನ್ನು ಮಕ್ಕಳು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕೆಂದು ಎಸ್.ಎಂ,ಸಿ ಅಧ್ಯಕ್ಷರಾದ ಮೊಹಮ್ಮದ್ ಹಾಜಿ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಮಹಾಲಿಂಗೇಶ್ವರ ಭಟ್ ಅವರು ಮಾತನಾಡುತ್ತಾ ಹೆತ್ತವರು ಈ ಕಾರ್ಯಕ್ರಮದಲ್ಲಿ ಸಹಕರಿಸಿದಾಗ ಮಾತ್ರ ಯಶಸ್ಸನ್ನು ಕಾಣಬಹುದು ಎಂದರು.ಕಾರ್ಯಕ್ರಮವನ್ನು ಅಧ್ಯಾಪಕರಾದ ಶ್ರೀ ಕೃಷ್ಣೋಜಿ ರಾವ್ ನಿರೂಪಿಸಿದರು.ಅಧ್ಯಾಪಕರಾದ ಶ್ರೀ ಶರತ್ ಕುಮಾರ್ ಸ್ವಾಗತಿಸಿ ಶ್ರೀಮತಿ ಬೀನಾ ಟೀಟರ್ ವಂದಿಸಿದರು. 

No comments:

Post a comment