Our School Established on August 15th 1947, on the Day of Independence
Welcome to all....

Wednesday, 1 October 2014

ಸ್ವಾತಂತ್ರ್ಯ ಹೋರಾಟಗಾರ ಶ್ರೀಯುತ ನಾಮದೇವ ಶೆಣೈಯವರಿಗೆ ಸನ್ಮಾನ
 ದಿನಾಂಕ 01.10.2014 ರಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶ್ರೀಯುತ ನಾಮದೇವ ಶೆಣೈಯವರನ್ನು ಶಾಲೆಯಲ್ಲಿ ಸನ್ಮಾನಿಸಲಾಯಿತು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀಯುತರು ದೇಶಭಕ್ತಿಗೀತೆಗಳನ್ನು ಹಾಡಿ ಮಕ್ಕಳಲ್ಲಿ ದೇಶಪ್ರೇಮವನ್ನು ತುಂಬಿದರು.90 ವರ್ಷ ವಯಸ್ಸಿನ ಸರ್ವೋದಯ ನಾಯಕರಾದ ಇವರು ತಮ್ಮ ಆರೋಗ್ಯದ ಗುಟ್ಟನ್ನು ಮಕ್ಕಳೊಂದಿಗೆ ಹಂಚಿಕೊಂಡರು.ವಿಷರಹಿತವಾದ ಪರಿಶುದ್ಧ ಆಹಾರ ಸೇವನೆ ಮತ್ತು ವ್ಯಾಯಾಮ ಆಯುಷ್ಯವನ್ನು ಹಚ್ಚಿಸಬಲ್ಲುದೆಂದರು.ಗಾಂಧೀಜಿಯ ಜೀವನದ ಕೆಲವು ಘಟನೆಗಳನ್ನು ವಿವರಿಸಿದರು.ಇವರು ತಮ್ಮ ಎಳೆವಯಸ್ಸಿನಲ್ಲಿ ಗಾಂಧೀಜಿಯವರ ಸ್ವಾತಂತ್ರ್ಯ ಸಂದೇಶವನ್ನು ಸಾರುವ ವಾಹಕರಾಗಿ ಕಾರ್ಯನಿರ್ವಹಿಸಿದ್ದರು.

No comments:

Post a comment